2
ಖ್ಹಾಚಿ ಉಪದೇಶ್‌ನಿ ಬಾರೇಮ
ಕತೋಬಿ ತೂ ಇನಾಸ್ ಶಿಕಾಡ್ ಖ್ಹಾಚಿ ಉಪದೇಶ್‍ನ ಕಿಮ್ ಛಾ಼ಕಿ ಇಮ್ಮಸ್ ಬೋಲಿದೆ. ಬುಢಾಖ್ಹಾರು ಪಿಯಾವಾಳು ನಾ ರ‍್ಹೇವ್ಣುತೇಬಿ, ಮರ್ಯಾದಿಥಿ ರ‍್ಹಹವಾಳೂಬಿ, ಇವ್ಣು ಇವ್ಣೆಸ್ ದಾಬುಕ್ಮ ರ‍್ಹವಾಳುಬಿ ಹುಯಿರ‍್ಹೇಣು, ಪ್ಯಾರ್, ಖ್ಹಮಾಳಿಲ್ಯವಾನು, ಅಜು಼ ವಿಶ್ವಾಸ್‌ಮ ರ‍್ಹವಾಳು ಹುಯಿರ‍್ಹೇಣು ಕರಿ ಶಿಕಾಡ್‌. ಇಮ್ಮಸ್ ಬುಢಿಯಖ್ಹಾರು ಛಾ಼ಡಿ ಬೋಲವಾಳಿಯೆ ನಾ ಹುಯಿರ‍್ಹೇಣು, ಅಜು಼ ಪಿಯಾವಾಳಿಯೆ ನಾ ಹುಯಿರ‍್ಹೇಣುತೆ ದೇವ್‌ಮ ಭಕ್ತೆಹುಯಿನ್‌ ಜಿಮ್ಮೆದಾರಿವಾಳಿ ಹುಯಿರ‍್ಹೇಣು. ಇಮ್ಮಸ್‌ ಬುಢಿಯಬಾಯ್ಕ ವ್ಹೆತ್ತಿ ಬಾಯ್ಕಾವ್‌ನ, ಇವ್ಣೆ “ಇವ್ಣ ಇವ್ಣ ಬಾವ್ರಿನ ಅಜು಼ ಲಡ್ಕಾವ್ನ ಪ್ಯಾರ್‌ಕರಾದೆಕರಿ ಅಕ್ಕಲ್‌ ಬೋಲಿದ್ಯವಾದೆ. ಇವ್ಣೆ ಶೊಂತ್‌ ಘರ್ನಖ್ಹಾಜೆ ಅಛ಼್ಛುಕಾಮ್ ಕರಾವಾಳಿಯೇಬಿ, ಗ್ರಿಸ್ತಿಥಿ, ಇವ್ಣ ಇವ್ಣ ಬಾವ್ರಿನ ದಾಬುಕ್ಮ ರ‍್ಹೀನ್ ಜಿವ್ಣುಕರಾನ ಬುಢಿಯ ಬಾಯ್ಕೆಥಿ ಶಿಕಿಲ್ಯವಾದೆ. ಇಮ್ಮಸ್ ದೇವ್ನಿ ವಚನ್ನ ಕೋಣ್‌ಬಿ ಚಿಂಘಾವ್ಣಿ ನಾ ಕಾಡ್ನುತೆ ತಿಮ್ ಚಾ಼ಲಿಲ್ಯವಾದೆ.
ಇಮ್ಮಸ್ ಜಾ಼ನ್ಜ಼ಮಾನ್ ಛೋ಼ಕ್ರಾವ್‌ನ ಇವ್ಣು ಇವ್ಣೆ ಕಿಮ್ ದಾಬುಕ್ಮ ರ‍್ಹೇವ್ಣುಕರಿ ಬೋಲಿಒತಾಳ್‌, ತುಮಾರ ಭೋದನ್ ಕಾಮ್ ಖ್ಹಾರಾಮ, ತೂ ಕಿಮ್ ರ‍್ಹೇಸ್ಕಿ ತಿಮ್ ಬಿಜೇಕ್ ಜ಼ಣಾನ ಬರಾಬರ್‌ಥಿ ವತಾಳಿಲೆ. ತೂ ಶಿಕಾನ ಹಗಾಮ್ಮ ಇಮಾನ್‌ದಾರ್ ಅಜು಼ ಗ್ರಿಸ್ತಿಥಿ ರ‍್ಹೇ. ಶಿಕಾಡನಿ ವಖ್ಹ್‌ತೆ ಅಛ್ಛಿವಾತೆ ಶಾತ್ಕಿ ಯೋಸ್ ಬೋಲಿದೆ.ಅಮ್ ರ‍್ಹವಾನಿವಖ್ಹ್‌ತೆ ತಾರಪರ್ ವಿರೋದ್ ರ‍್ಹವಾಳನ, ತಾರಿ ವಿರುದ್ಧವಾತೆಬೋಲಾನ ಶಾತ್‍ಬಿಕೊಂತೆ ಇವ್ಣು ಇವ್ಣೇಸ್ ಖ್ಹರ್‌ಮಾವನಿಘೋಣಿ ಹುಯಿಜಾ಼ಶೆ. ಗುಲಾಮ್ ಖ್ಹಾರು ಇವ್ಣೆ ಇವ್ಣೊ ಯಜಮಾನ್ನಿ ವಾತೇನ ಖ್ಹಮ್‌ಜಿನ್‌ ಚಾ಼ಲ್ನು ಅಜು಼ ಖ್ಹಾರಾಸ್ ಕಾಮ್ಮ ಇವ್ಣೆ ಖ್ಹಾಜಾ಼ನಿಘೋಣಿ ಕೋಶಿಶ್ ಕರ‍್ನು.ರ‍್ಹೇಣು. 10 ಇವ್ಣ ಯಜಮಾನ್ನ ಫರೈವಾತೆ ನಾಬೋಲ್ನುತೆ, ಶಾತ್ಬಿ ಚೋ಼ರಿ ನಾ ಕರ್ನುತೆ, ಇವ್ಣೆ ಅಛ್ಛಿ ವಿಶ್ವಾಸ್ನಕರಿ ವತಾಳ್ಣು. ಅನೇಥಿ ಅಪ್ಣೊ ರಕ್ಷಕ್ ಹುಯಿರ‍್ಹೋತೆ ದೇವ್ನಿ ಬೋಧನೆನ ಅಖ್ಖೀಸ್ ಪರಕ್ಮ ಗೌರವ್ ಮಳಾನಿಘೊಣಿ ಚಾ಼ಲಿಲೇವ್ಣು ಕರಿ ಇವ್ಣುನ ಬೋಲ್. 11 ದೇವ್ನೆ ತಮಾಮ್‌ ಅದ್ಮಿನ ರಕ್ಷಣೆ ದ್ಯವಾನಿ ಇನಿ ವಾರ್‌ಖ್ಹಾನ ದೆಖಾಡಿರಾಖ್ಯೋಸ್. 12 ಅಜು಼ ಅಪ್ಣು ಭಕ್ತಿಕೊಂತೆ ಜಿವ್ಣನ ಅಜು಼ ಜಗತ್ನಿ ಹರಖ್ಹ್‌ನ ಮ್ಹೇಲಿದೇಣು, ಅಜು಼ ಅಮ್ನು ಜಿವ್ಣು ಕರ್ನುಕಿ ಅನೇಥಿ ಖ್ಹಾಚಿ ಭಕ್ತಿಥಿ ರ‍್ಹವಾನು ಅಜು಼ ಇನುಯೋ ದಾಬುಕ್‌ಥಿ ರ‍್ಹವಾನ ಪರಕ್‍ಥಿ ಆ ಜಗತ್‌ಮ ಬಚಿರ‍್ಹೇಣು. 13 ಕತೊ ಕಿಮ್ ಭರೋಖ್ಹೊ ಕರೀನ್ ಜ಼ಪುಕರೇ಼ತೆ ಖ್ಹುಶಿನೊ ದನ್ನಖ್ಹಾಜೆ, ಅಪ್ಣೆ ಅಮ್ಮಸ್ ಜಿವ್ಣು. ತದೆ ಯೋ ದನ್ಮ ಅಪ್ಣೊ ಮಹಾನ್ ದೇವ್ ಅಜು಼ ರಕ್ಷಕ್ ಹುಯಿರ‍್ಹೋತೆ ಯೇಸುಕ್ರಿಸ್ತನಿ ಮಹಿಮೆ ದೆಖಾವ್‌ಶೆ. 14 ಯೊ ಅಪ್ಣಖ್ಹಾಜೆ ಇನುಯೋ ದೆವೈಗಯೊ. ಇನಖ್ಹಾಜೆ ಯೊ ಅಪ್ಣುನ ಅಖ್ಖೀಥರಾನು ಖರಾಬ್ ಚಾ಼ಲ್‌ಥಿ ಛೋ಼ಡಾವನ ಟೇಕೆ, ಅಜು಼ ಅಪ್ಣುನ ಶುದ್ದ ಅದ್ಮಿ ಕರಾನಖ್ಹಾಜೆ ಯೊ ಶೊಂತ್‌ವಾಳೊ ಹುಯಿರ‍್ಹೋಸ್ ಅಜು಼ ಅಛ್ಛಾ಼ನ ಕರಾನ ದಿಲ್‌ಲಾಗವಾಳೊ ಹುಯಿರ‍್ಹೋಸ್. 15 ಆ ಖ್ಹಾರಿ ವಾತೆ ಶಿಕಾಡ್. ತಾರಿ ಅಖ್ಖೀಸ್ ಅದಿಕಾರ್‌ಥಿ ಇವ್ಣುನ ಭಾಲಿಬೋಲ್ ಅಜು಼ ಗುರ್‌ಕಾವ್ ಶನಕತೊ ಕೋಣ್‌ಬಿ ತುನ ‍ತಿರಸ್ಕಾರ್ ನಾ ಕರ್ನುತೆ ಇಮ್‌ ದೇಖಿಲೆ.