13
ಬೇ ಜಾನ್ವರ್‌
ತದೆ ದರ‍್ಯಾವ್‌ಮಾಥು ಏಕ್‌ ಜಾನ್ವರ್‌ ನಿಕಳ್ತು ಆವನು ಮೆ ದೇಖ್ಯೊ. ಇನ ಖ್ಹಾತ್ ಮುಡ್‌ಕ್ಯಾಬಿ ದಖ್ಹ್‌ ಶಿಂಗ್ಡ ಥು. ಯೊ ಶಿಂಗ್ಡಾವ್‌ಪರ್ ದಖ್ಹ್‌ ಕಿರೀಟ್‌ಬಿ, ತಾಳ್ವಪರ್ ದೇವ್ನ ಗಾಳೆದ್ಯವಾನು ನಾಮ್‌ಅಖ್ಖು ಲೀಖೈರ‍್ಹೂಥು. ಮೇ ದೇಖ್ಯೋತೆ ಜಾನ್ವರ್‌ ಅದೋಗಾನಿತರಾಬಿ ಇನ ಗೋಡ ರೀಚ಼್‌ನ ಗೋಡಾನಿಘೋಣಿಬಿ ಥು. ಇನು ಬಾಕು ಶುಂಭಾನ ಡಾಚ಼ನಿತರಾಬಿ ಥು. ಅರ್ಝ಼ನ ಇನ ಶಕತ್‌ಬಿ, ಸಿಂಹಾಸನ್‌ಬಿ, ಮೋಟಿ ಅದಿಕಾರ್‌ನ ದಿದು. ಜಾನ್ವರ್‌ನ ಏಕ್‌ ಮುಡ್‌ಕ್ಯು ಘಾವ್‌ಹುಯಿನ್ ಮರ‍್ವನಿತರ ದೆಖವ್‌ಕರ್ತುಥು. ಯೊ ಮರಣ್ಣೊ ಘಾವ್ ಅಛ್ಛು಼ ಹುಯಿಗು, ಧರ್ತಿನ ಜಗತ್‌ನು ಅದ್ಮಿಖ್ಹಾರು ಯೊ ಜಾನ್ವರ್‌ನ ದೇಖಿನ್ ಆಶ್ಚರ್ಯ ಕರ‍್ಯು. ಅರ್ಝ಼ನ ಯೊ ಜಾನ್ವರ್‌ನ ಅದಿಕಾರ್ ದಿರಾಖ್ಯೊತೆಖ್ಹಾಜೆ ಇವ್ಣೆ ಯೊ ಅರ್ಝ಼ನ ಆರಾದನೆಕರ‍್ಯು. ಅಜು಼ ಇವ್ಣೆ “ಯೋ ಜಾನ್ವರ್‌ನಾಬಿ ಅರಾದನೆ ಕರೀನ್, ಆ ಜಾನ್ವರ್‌ನ ಬರೋಬರಿ ಕೋಣ್ ಛಾ಼? ಅನ ವಿರೋದ್ ಜಂಗ್ ಭಿಡಾನ ಕೋಣ್ ಶಕತ್‌ವಾಳು? ಕರಿ ಬೋಲ್ಯು. ಯೊ ಜಾನ್ವರ್‌ನೆ ಬಡೈನಿ ವಾತೆಥೀಬಿ ಗಾಳೆಥೀಬಿ ಬೋಲಾನ ಮ್ಹೋಡು ದೆವೈರ‍್ಹುಥು. ಅಜು಼ ಬೇಉಪ್ಪರ್ ಚಾ಼ಳಿಖ್ಹ್ ಮಹಿನಲಗು ಇನು ಕಾಮ್‌ಖ್ಹಾರು ಚ಼ಲಾವನಿ ಅದಿಕಾರ್‌ಬಿ ಇನ ದೆವೈರ‍್ಹುಥು. ತದೆ ಯೊ ಜಾನ್ವರ್‌ನೆ ದೇವ್ನ ಗಾಳೆದಿದು ಕಾಹೆತೆ ಇನ ನಾಮ್ನಾಬಿ, ಯೊ ರ‍್ಹವಾನ ಮಂದಿರ್‌ನಾಬಿ, ಸೊರ್ಗಾಮ ರ‍್ಹವಾಳಖ್ಹಾರಾನ ಗಾಳೆದಿದು. ಆ ನಾಹುಯಿನ್ ದೇವ್ನ ಪರಿಶುದ್ಧ ಅದ್ಮಿವ್‌ಪರ್ ಜಂಗ್ ಭೀಡಿನ್ ಇವ್ಣುನ ಹರಾವನಿ ಅದಿಕಾರ್ ದೆವಾಯು ಅಜು಼ ಅಖ್ಖೀಸ್ ಖೂಮ್‌, ಬೋಲಿ, ಲೋಗ್, ಜ಼ಗ್‌ಜಾ಼ತ್‌ಪರ್ ಇನ ಅದಿಕಾರ್ ದೆವಾಯು. ಜಗತ್‌ ಉಬ್‌ಜಾ಼ನ ಪಹಿಲೆಸ್ ರ‍್ಹೇಖ್ಹಾಯೊತೆ ಮೇಂಢಾನ ಚೆಲ್ಕು ಹುಯಿರ‍್ಹವಾಳನ ಛಾ಼ತೆ ಜಾನ್ನ ಹಕ್‌ವಾಳಾನಿ ಪುಸ್ತಕ್‌ಮ ಕಿನುಕಿನು ನಾಮ್‌ಖ್ಹಾರು ಲೀಖೈರ‍್ಹುಕೊಯ್ನಿಕಿ ಜ಼ಮೀನ್ನು ಯೊ ಅದ್ಮಿಖ್ಹಾರೂಸ್ ಯೊ ಭಯಂಕರ್ ಜಾನ್ವರ್‌ನ ಆರಾದನೆ ಕರ್ಶೆ. ಕಾನ್‌ರ‍್ಹವಾಳು ಖ್ಹಮ್‌ಜಾ಼ದೆ; 10 ಕೋಂಡಿಘಾಲವಳೊ, ಇನುಯೋಸ್ ಜೇಲ್‌ಮ ಜಾ಼ಶೆ, ತಲ್ವಾರ್‌ಥಿ ಮಾರವಳು ತಲ್ವಾರ್‌ಥೀಸ್ ಮರ್ಶೆ. ಅನಾಮ ದೇವ್ನು ಅದ್ಮಿಖ್ಹಾರು ಖ್ಹಮಾಳಿನ್ ವಿಶ್ವಾಸ್‌ಥಿ ರ‍್ಹೇವ್ಣು. 11 ಅಜೇಕ್ ಜಾನ್ವರ್‌ ಜ಼ಮೀನ್‌ಮಾಥು ಆವನು ದೇಖ್ಯೊ. ಅನ ಮೇಂಢಾನಿತರ ಬೇ ಶಿಂಗ್ಡು ಥು, ಯೊ ಅರ್ಝ಼ನಿತರ ವಾತೆ ಬೋಲ್ಯು. 12 ಆ ಜಾನ್ವರ್‌ ಪಹಿಲ ಜಾನ್ವರ್‌ನ ಖ್ಹಾಮ್ಣೆ ಇನಿ ಅಖ್ಖೀಸ್ ಅದಿಕಾರ್‌ನ ಚ಼ಲೈನ್, ಮರಣ್ಣೊಘಾವ್ ಗುಣ್‌ಹುಯುತೆ ಪಹಿಲ ಜಾನ್ವರ್‌ನ ಜ಼ಮೀನ್‌ಪರ್ ರ‍್ಹವಾಳು ಇನ ಆರಾದನೆ ಕರಾನಿಘೋಣಿ ಕರ‍್ಯು. 13 ಹೈರುತೆ ಅದ್ಮಿನ ಖ್ಹಾಮ್ಣೆ ಆಬ್‍ಥು ಆಗ್ ಜ಼ಮೀನ್‌ಪರ್ ರಂಚಾ಼ವನಿತರನು ಅದ್ಭುತ್‌ಖ್ಹಾರು ಕರ್ತುಹುಯಿನ್, 14 ಯೊ ಪಹಿಲ ಜಾನ್ವರ್‌ನ ಖ್ಹಾಮ್ಣೆ ಅದ್ಭುತ್‌ಖ್ಹಾರು ಕರಾನು ಅದಿಕಾರ್ ಛಾ಼ತೆ ಇನಖ್ಹಾಜೆ ಧರ್ತಿನ ಅದ್ಮಿಖ್ಹಾರನ ಖ್ಹೈಲು ಕರ‍್ಯು. ಇವ್ಣುನ ತಲ್ವಾರ್‌ಥಿ ಘಾವ್‌ಹುಯಿನ್ ಮರ‍್ಯುಕೊಂತೆ ಬಚಿರ‍್ಹುತೆ ಜಾನ್ವರ್‌ನ ಮರ್ಯಾದಿ ದ್ಯವಾನಖ್ಹಾಜೆ ಮೂರತ್ ಬಣಾವ್ಣುಕರಿ ಹುಕುಮ್ ಕರ‍್ಯು. 15 ಆ ನಾಹುಯಿನ್ ಆ ಬೇನು ಜಾನ್ವರ್‌ನ ಮೂರತ್ನ ಜಾನ್‌ ದ್ಯವಾನಿ ತಾಖತ್‌ಬಿ ಮಳ್ಯು. ಇನ ಖ್ಹಲಾಮ್ ಕರಾಕೊಂತೆ ಖ್ಹಾರಸ್ನ ಮರ್‌ನಾಖನಿ ಶಕತ್ ಇನಥು. 16 ಆ ಬೇನು ಜಾನ್ವರ್‌ಬಿ, ಶಾಣು, ಅಡ್ಡಾಣಿ, ಶೌಕಾರ್, ಗರೀಬ್, ಛುಟ್ಕಾರ್‌ರ‍್ಹವಾಳು, ಗುಲಾಮ್‌ಖ್ಹಾರು ಅಖ್ಖೂಬಿ ಇವ್ಣ ಇವ್ಣ ಖಾವಹಾತ್ಪರ್ ರ‍್ಹವೊ, ತಾಳ್ವಪರ್ ರ‍್ಹವೊ ಖ್ಹಣೇದ್ ನಖಾವ್ಣು ಕರಿ ಜು಼ಲಮ್‌ ಕರ‍್ಯು. 17 ಯೊ ಖ್ಹಣೇದ್ ಕಿನ ಕೊಯ್ನಿಕಿ ಇವ್ಣೆ ಲ್ಯಾವಾನ ಕೊಹುಯುನಿ ಅಜು಼ ವೇಚಾ಼ನಬಿ ಹುಯುಸ್ ಕೊಯ್ನಿ. ಯೊ ಖ್ಹಣೇದ್ ಖಿವುಕತೊ ಪಹಿಲ ಜಾನ್ವರ್‌ನು ನಾಮ್ ನತರ್ ಇನ ನಾಮ್ನ ವತಾಳನು ಗಣ್ತೀನು ಲೀಖ್ಯು. 18 ಅನ ಮಾಲುಮ್ ಕರಿಲ್ಯಾವಾನ ಗ್ಯಾನ್‌ಬಿ ಜ಼ರೂರತ್ ಛಾ಼. ಅಕ್ಲಿ ಯೊ ಜಾನ್ವರ್‌ನ ಗಣ್ತಿನ ಲೀಖ್ಯಾನ ಗಣಾದೆ, ಯೊ ಏಕ್‌ ಅದ್ಮಿನ ವತಾಳನು ಗಣ್ತೀನು ಲೀಖ್ಯು ಹುಯಿರ‍್ಹೂಸ್. ಇನು ಗಣ್ತೀನು ಲೀಖ್ಯು ಛೊ಼ಖ್ಹೊ ಛೋ಼ಪರ್ ತೀನಿಖ್ಹ್‌.