ಕೀರ್ತನೆ 87
ಕೋರಹೀಯರ ಕೀರ್ತನೆ. ಒಂದು ಗೀತೆ.
1 ಯೆಹೋವ ದೇವರು ತಮ್ಮ ಪಟ್ಟಣದ ಅಸ್ತಿವಾರವನ್ನು
ಪರಿಶುದ್ಧ ಪರ್ವತದಲ್ಲಿ ಸ್ಥಾಪಿಸಿದ್ದಾರೆ.
2 ದೇವರು ಚೀಯೋನಿನ ದ್ವಾರಗಳನ್ನು
ಯಾಕೋಬನ ಎಲ್ಲಾ ನಿವಾಸಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ.
3 ದೇವರ ಪಟ್ಟಣವೇ,
ನಿನ್ನ ವಿಷಯವಾದ ಮಹಿಮೆಯು ಏನೆಂದರೆ,
4 “ರಾಹಬ್, ಬಾಬೆಲ್ ದೇಶಗಳವರನ್ನು,
ನನ್ನನ್ನು ಬಲ್ಲವರಲ್ಲಿ ಎಣಿಸುವೆನು.
ಇಗೋ, ಫಿಲಿಷ್ಟಿಯ, ಟೈರ್, ಕೂಷ್ ಜನಾಂಗಗಳು,
‘ಚೀಯೋನಿನಲ್ಲೇ ಹುಟ್ಟಿದವು.’ ”
5 ಚೀಯೋನಿನ ವಿಷಯವಾಗಿ,
“ಸಕಲ ಜನಾಂಗದವರೂ ಚೀಯೋನಿನಲ್ಲಿ ಹುಟ್ಟಿದರು.
ಮಹೋನ್ನತರೇ ಅದನ್ನು ಸ್ಥಿರಪಡಿಸುವರು,” ಎಂದು ಹೇಳುವರು.
6 ಯೆಹೋವ ದೇವರು ಜನಾಂಗಗಳ ಗ್ರಂಥದಲ್ಲಿ ಬರೆಯುವಾಗ,
“ಚೀಯೋನಿನಲ್ಲಿ ಇವನು ಹುಟ್ಟಿದನು,” ಎಂದು ಬರೆಯುವರು.
7 “ನನ್ನ ಎಲ್ಲಾ ಬುಗ್ಗೆಗಳು ನಿಮ್ಮಲ್ಲಿಯೇ ಇವೆ,”
ಎಂದು ಸಂಗೀತಕಾರರು ಹಾಡುವರು.