10
ಮೊರ್ದೆಕೈಯನ್ನು ಗೌರವಿಸಿದ್ದು
1 ಅಹಷ್ವೇರೋಷ್ ರಾಜನು ತನ್ನ ಪ್ರಜೆಗಳಿಂದ ತೆರಿಗೆಯನ್ನು ಎತ್ತಿದನು. ಅವನ ಸಾಮ್ರಾಜ್ಯದ ಪ್ರಜೆಗಳೆಲ್ಲರೂ ಹಾಗೂ ದೂರದ ಕರಾವಳಿಯ ನಗರವಾಸಿಗಳೂ, ತೆರಿಗೆಯನ್ನು ಕಟ್ಟಬೇಕಾಯಿತು.
2 ಅಹಷ್ವೇರೋಷ್ ಅರಸನು ಮಾಡಿದ ಎಲ್ಲಾ ಮಹತ್ಕಾರ್ಯಗಳೂ ಕೃತ್ಯಗಳೂ ಮೇದ್ಯ, ಪರ್ಶಿಯ ಅರಸರ ರಾಜಕಾಲವೃತ್ತಾಂತ ಪುಸ್ತಕಗಳಲ್ಲಿ ಬರೆಯಲ್ಪಟ್ಟಿರುತ್ತವೆ. ಮತ್ತು ಮೊರ್ದೆಕೈ ಮಾಡಿದ ವಿಷಯಗಳ ಬಗ್ಗೆಯೂ ಬರೆಯಲ್ಪಟ್ಟಿದೆ. ಮೊರ್ದೆಕೈಯನ್ನು ಅರಸನು ಬಹು ದೊಡ್ಡ ಪ್ರಭಾವಶಾಲಿ ವ್ಯಕ್ತಿಯನ್ನಾಗಿ ಮಾಡಿದನು.
3 ಅರಸನ ನಂತರ ರಾಜ್ಯದಲ್ಲಿ ಯೆಹೂದಿಯಾದ ಮೊರ್ದೆಕೈಯೇ ಮುಖ್ಯ ವ್ಯಕ್ತಿಯಾಗಿದ್ದನು. ರಾಜ್ಯದಲ್ಲಿ ಅವನಿಗೆ ಎರಡನೇ ಸ್ಥಾನವಿತ್ತು. ಯೆಹೂದ್ಯರೊಳಗೆ ಅವನು ಪ್ರಮುಖ ವ್ಯಕ್ತಿಯಾಗಿದ್ದನು. ಯೆಹೂದ್ಯರೆಲ್ಲರೂ ಅವನನ್ನು ಬಹಳವಾಗಿ ಗೌರವಿಸುತ್ತಿದ್ದರು. ತನ್ನ ಜನರ ಒಳಿತಿಗಾಗಿ (ಜನರಿಗೋಸ್ಕರವಾಗಿ) ಮೊರ್ದೆಕೈ ಬಹಳವಾಗಿ ಪ್ರಯಾಸಪಟ್ಟಿದ್ದರಿಂದ ಜನರು ಅವನನ್ನು ಸನ್ಮಾನಿಸಿದರು; ಮೊರ್ದೆಕೈ ಯೆಹೂದ್ಯರೆಲ್ಲರಿಗೆ ಸಮಾಧಾನವನ್ನು ತಂದನು.